ಸಾಲಬಾಧೆ, ಕಿರುಕುಳಕ್ಕೆ ನೊಂದ ರೈತ ಆತ್ಮಹತ್ಯೆ: ಮೃತನ ಮನೆ ಹರಾಜಿಗೆ ಪ್ರಕ್ರಿಯೆ*
ಮೃತಪಟ್ಟ ಎಂಟು ದಿನಗಳಲ್ಲೇ ಕುಟುಂಬಕ್ಕೆ ಕರಾಳ ಶಾಕ್: ಬದುಕಿಗೆ ದಾರಿ ತೋರುವಂತೆ ಜಿಲ್ಲಾಡಳಿತಕ್ಕೆ ರೈತ ಸಂಘದ ಮನವಿ ಬೆಳಗಾವಿ:24.11.2025 ಸಾಲ ಮರುಪಾವತಿಗಾಗಿ ಸಹಕಾರಿ ಸೊಸೈಟಿಯವರು ನೀಡಿದ ಅತಿಯಾದ ಕಿರುಕುಳ ಮತ್ತು ಒತ್ತಡಕ್ಕೆ ನೊಂದು ಬೆಳಗಾವಿ ತಾಲೂಕಿನ ರೈತರೊಬ್ಬರು ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ದುರಂತವೆಂದರೆ, ರೈತ ಆತ್ಮಹತ್ಯೆ ಮಾಡಿಕೊಂಡ ಕೇವಲ ಎಂಟು ದಿನಗಳ...










