ಬೆಳಗಾವಿ:
ಪ್ರಸಕ್ತ ವರ್ಷದ ಕೊನೆಯ ಹಾಗೂ ವರ್ಷದ ನಾಲ್ಕನೇ ಬೃಹತ್ ಲೋಕ ಅದಾಲತ್ ಅನ್ನು ಡಿಸೆಂಬರ್ 13 ರಂದು ಆಯೋಜಿಸಲಾಗಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ನ್ಯಾಯಾಲಯಕ್ಕೆ ಬರುವ ಸಾಧ್ಯತೆಯಿರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ತಿಳಿಸಿದರು.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕ ಅದಾಲತ್‌ನಲ್ಲಿ ವಿಶೇಷವಾಗಿ ಹಳೆಯ ಪ್ರಕರಣಗಳು, ಮೋಟಾರು ವಾಹನ ಕಾಯಿದೆ ಪರಿಹಾರ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು (ವೈವಾಹಿಕ ಪ್ರಕರಣಗಳು), ಕ್ರಿಮಿನಲ್ ಪ್ರಕರಣಗಳು ಮತ್ತು ಚೆಕ್ ಅಮಾನ್ಯ (ಚೆಕ್ ಬೌನ್ಸ್) ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಒಟ್ಟು 20 ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಕನಿಷ್ಠ 15 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.
*ತಾಲೂಕು ಮಟ್ಟದಲ್ಲೂ ಲೋಕ ಅದಾಲತ್*
ಜಿಲ್ಲೆಯಾದ್ಯಂತ ಒಟ್ಟು 14 ಕಡೆಗಳಲ್ಲಿರುವ ತಾಲೂಕು ನ್ಯಾಯಾಲಯ ಸಂಕೀರ್ಣಗಳಲ್ಲಿಯೂ ಲೋಕ ಅದಾಲತ್ ನಡೆಯಲಿದೆ. ಸಂಬಂಧಿಸಿದ ಕಕ್ಷಿದಾರರಿಗೆ ಈಗಾಗಲೇ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ನ್ಯಾಯಾಧೀಶರು ಮಾಹಿತಿ ನೀಡಿದರು.
ಕಳೆದ ಬೃಹತ್ ಲೋಕ ಅದಾಲತ್‌ನಲ್ಲಿ 14,500 ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಿದ್ದವು. ಇದರ ಜೊತೆಗೆ ನ್ಯಾಯಾಲಯಕ್ಕೆ ಬರಬಹುದಾಗಿದ್ದ 1.50 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ವ್ಯಾಜ್ಯಪೂರ್ವ ಪ್ರಕರಣಗಳು ರಾಜಿಗೆ ಬರುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
*ಸಂಚಾರ ದಂಡ ಪಾವತಿಗೆ ರಿಯಾಯಿತಿ ವಿಸ್ತರಣೆ*
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಹಳೆಯ ಪ್ರಕರಣಗಳ ದಂಡದ ಮೊತ್ತ ತುಂಬುವಲ್ಲಿ ಸರ್ಕಾರ ಘೋಷಿಸಿರುವ ಶೇ.50ರಷ್ಟು ರಿಯಾಯಿತಿಯು ಡಿಸೆಂಬರ್ 12 ರವರೆಗೆ ಇರಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಾಲಯದ ಆವರಣ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಂಡ ಪಾವತಿ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ನ್ಯಾಯಾಧೀಶ ಮಂಜುನಾಥ ನಾಯಕ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ ಪಾಟೀಲ ಅವರು ಉಪಸ್ಥಿತರಿದ್ದರು.
You Might Also Like
ಬೆಳಗಾವಿ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು: ಬಲಿ ಸಂಖ್ಯೆ 31ಕ್ಕೆ ಏರಿಕೆ
ಒಟ್ಟು 31 ಕೃಷ್ಣಮೃಗಗಳ ನಿಗೂಢ ಸಾವು; 'ಗಳಲೇ ರೋಗ'ದ ಶಂಕೆ; ನಿರ್ಲಕ್ಷ್ಯ, ನೀರಿನ ಸಮಸ್ಯೆ ಬಗ್ಗೆ ತನಿಖೆ ಅಗತ್ಯ ಬೆಳಗಾವಿ:17.11.2025 ಬೆಳಗಾವಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ...
ಬೆಳಗಾವಿ ಬಸ್ ನಿಲ್ದಾಣ: ಶೌಚಾಲಯದ ಅಕ್ರಮ ವಸೂಲಿಗೆ ಉಪಾಧ್ಯಕ್ಷರ ಖುದ್ದು ಭೇಟಿ; ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆದೇಶ
ನಿಗದಿಗಿಂತ ಹೆಚ್ಚು ಹಣ ವಸೂಲಿ ದೃಢ: ಪ್ರಯಾಣಿಕರ ದೂರಿಗೆ NWKRTC ಉಪಾಧ್ಯಕ್ಷರ ಸ್ಪಂದನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರನು...
ಕತ್ತಿ, ಎಬಿ, ಏಟಿಗೆ ಕಾಲ್ಕಿತ್ತ ಜಾರಕಿಹೊಳಿ ಪೆನಲ್, ಭಾರಿ ಹಿನ್ನಡೆ ಮುಖಭಂಗ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಮೇಶ್ ಕತ್ತಿಯವರ ಪೆನಲ್ ಮುನ್ನಡೆ ಸಾಧಿಸಿದೆ. ರಮೇಶ್ ಕತ್ತಿ...
ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು..
ಹೌದು ವೀಕ್ಷಕರೇ, ವಿಜಯಪುರ ಜಿಲ್ಲೆಯ ಚಡಚಣ ಪಕ್ಕದಲ್ಲಿರುವ ದೇವರ ನಿಂಬರಗಿ ಗ್ರಾಮದಲ್ಲಿ ಮಹದೇವ್ ಬೈಯರ್ಗೊಂಡ ಅವರ ಬಲ ಗೈ ಬಂಟನಾದ ಭೀಮ ಗೌಡ ಬಿರಾದರ್ ಮಟಾಶ್... ಮಹದೇವ್...
ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ! ಕಠಿಣ ಕ್ರಮಕ್ಕೆ ತಾಲೂಕು ಬಿಜೆಪಿ ಒತ್ತಾಯ!!
ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ! ಕಠಿಣ ಕ್ರಮಕ್ಕೆ ತಾಲೂಕು ಬಿಜೆಪಿ ಒತ್ತಾಯ!! ಶಿಗ್ಗಾವಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಇಂದು ಪಟ್ಟಣದಲ್ಲಿ ಬಿಜೆಪಿ ವತಿಯಿಂದ...





