ವಿಜಯಪುರ

ಬಾಯಿ ಹರೇ ಬಿಟ್ಟ ಖಾದ್ರಿ ಯವರೆ ನೀವು ವಿದ್ಯಾವಂತರೊ ಅವಿದ್ಯವಂತರೊ,,,

100Views

ಬಸನಗೌಡ ಪಾಟೀಲ ಅವರು ಮೊನ್ನೆ ನೀಡಿದ ಹೇಳಿಕೆಯನ್ನು ಆದರಿಸಿ ಎರಡು ದಿನದ ಹಿಂದೆ ಖಾದ್ರಿ ಅನ್ನುವ ಒರ್ವ ಪ್ರಜ್ಞಾವಂತ ನಾಗರಿಕನ ಬಾಯಲ್ಲಿ ಅವಿದ್ಯಾವಂತರು ಆಡುವ ಮಾತಿನಂತೆ ಮಾತನಾಡಿ ಜನರ ಮನಸನ್ನು ಗೆಲ್ಲಬಲ್ಲೆ ಎಂಬ ಅತಿಸೇ ಜಾಣತನದ ಮಾತುಗಳನ್ನು ಮಾಧ್ಯಮ ಮುಂದೆ ರಾಜ ರೋಷವಾಗಿ ಆಡಿದಲ್ಲದೆ ಇಂದು ಅದೇ ಮಾತುಗಳು ಏನೊ ಬರದಲ್ಲಿ ಆಡಿದ್ದಿನಿ ಆಡಿದ ಮಾತು ಹಿಂದೆ ತೆಗಿದುಕೊಳ್ಳತಿನಿ ಅನ್ನೊ ದಡ್ಡತನದ ಹೇಳಿಕೆಗೆ ಏನು ಅನ್ನಬೇಕೊ ಎಂಬುದೆ ತಿಳಿತಾ ಇಲ್ಲ…

ನಗರ ಶಾಸಕರು ನೀಡಿದ ಹೇಳಿಕೆ ಒಂದು ಸಮುದಾಯಕ್ಕೆ ದಕ್ಕೆ ತರುವಂತಹದು ಅದರಲ್ಲಿ ಎರಡು ಮಾತಿಲ್ಲ ಆದರೆ ಭಾರತ ದೇಶದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನಮಾನವಿದೆ ಆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ದು ಒಂದುಕಡೆ ಆದರೆ ಇಲ್ಲಿ ಖಾದ್ರಿ ಎನ್ನುವ ಓರ್ವ ವಕೀಲ ಯತ್ನಾಳ ಅವರಿಗೆ ಎರಡು ಗಂಡು ಮಕ್ಕಳಿದ್ದಾರೆ ಅವರಿಗೆ ದಲಿತ ಹೆಣ್ಣು ಮಕ್ಕಳ ಅವಶ್ಯಕತೆ ಇದೆ ಅದರ್ ಬ್ಯಾಕ್ವಾಡ ಕ್ಲಾಸ್ ಹೆಣ್ಣುಮಕ್ಕಳನ್ನ ಅವರ ಮನೆಯ ಸ್ವಸೆಯನ್ನರಾಗಿ ಮಾಡಿಕೊಂಡಲ್ಲಿ ನಾನು ಒಂದು ಕೋಟಿ ರೂಪಾಯಿ ಕೊಡುತ್ತೆನೆ ಎಂದು ಗಂಟಾ ಘೋಷವಾಗಿ ಮಾತನಾಡಿ ಮನೆಗೆ ಹೋಗಿ ಮಲಗಿ ಎದ್ದು ಮರುದಿನ ಪೇಸಬುಕ್ ಲೈವ ಬಂದು ನಾನು ಯಾವುದೊ ಬರಾಟೆಯಲ್ಲಿ ಗಡಿಬಿಡಿಯಲ್ಲಿ ಮಾತನಾಡಿದ್ದೆ ದಲಿತ ಸಹೋದರಿಯರ ಬಗ್ಗೆ ಮಾತಾಡಿದಕ್ಕೆ ವಿಷಾದಿಸುತ್ತೆನೆ ಎಂಬ ಪದ ಬಳಕೆ ಮಾಡಿದ್ದು (ನೀವೆ ಸಮರ್ಥಿಸಿಕೊಳ್ಳಿ) ಆ ಮಾತು ವಾಪಸ್ ತೊಗೊತಿನಿ ಅಂದಿದ್ದು ನಡಿಯಲ್ಲ ವಕೀಲ ಸಾಹೇಬರೆ,


ನೀವು ಮತ್ತೆ ಪ್ರತಿಕಾ ಗೋಷ್ಠಿ ಕರೆದು ಅಂಬೇಡ್ಕರ್ ವೃತ್ತದಲ್ಲಿ ಬಂದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಕ್ಷಮಿಸೊ ವಿಚಾರ ನಮ್ಮ ಸಹೋದರಿಯರಿಗೆ ಬಿಟ್ಟಿದ್ದು ಆದರೆ ಒಂದು ಜಾತಿಯ ಬಗ್ಗೆ ಕೀಳಾಗಿ ಮಾತಾಡುವಾಗ ಮೈ ಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತಾಡಬೇಕು ಒಂದು ವೇಳೆ ಕ್ಷಮೆ ಕೇಳದೆ ಇದ್ದಲ್ಲಿ ಮುಂದೆ ಆಗು ಹೊಗುಗಳಿಗೆ ನೇರವಾಗಿ ನಿವೇ ಹೊಣೆಗಾರಿಕೆ ಆಗುತ್ತಿರಿ…

ಬನಸಗೌಡರ ಮತ್ತು ನಿಮ್ಮ ವಿಚಾರಗಳು ವ್ಯಕ್ತಿಗತವಾಗಿಟ್ಟುಕೊಳ್ಳಿ ಅದನ್ನ ತಂದು ಇನ್ನೊಂದು ಸಮುದಾಯದವರನ್ನ ನಿಂದನೆ ಮಾಡುವುದು ಅವಮಾನ ಮಾಡುವುದು ಎಸ್ಟರ ಮಟ್ಟಿಗೆ ಸರಿ .ನೀವು ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ಈ ವರ್ತನೆ ಎಲ್ಲರ ಮನಸಿಗೆ ನೋವು ಊಂಟು ಮಾಡಿದೆ

ಇಲ್ಲಿ ದಲಿತ ಮತ್ತು ಬ್ಯಾಕವಾಡ್ ಕ್ಲಾಸ ಹೆಣ್ಣಮಕ್ಕಳು ಬಿಟ್ಟಿಬಿದ್ದಿಲ್ಲರಿ ವಕೀಲರ ನಿಮ್ಮ ಮನಿಯಲ್ಲು ಹೆಣ್ಣಮಕ್ಕಳು ಇದಾರೆ ಯಾರು ಅವರ ಬಗ್ಗೆ ಮಾತನಾಡಿದ್ದಾರೆ ಅವರ ಬಗ್ಗೆ ಮಾತಾಡಿ, ಇಲ್ಲ ಸಲ್ಲದ ಮಾತುಗಳು ಬೇರೆ ಸಮುದಾಯದ ಹೆಣ್ಣು‌ಮಕ್ಕಳ ಬಗ್ಗೆ ಕೀಳೆರಿಮೆಯ ಮಾತುಗಳು ಆಡುವುದು ಸರಿಯಲ್ಲ ಈ ಸಮಾಜದಲ್ಲಿ ಈ ದೇಶದಲ್ಲಿ ಹೆಣ್ಣಮಕ್ಕಳಿಗೆ ತನ್ನದೆ ಆದ ಗೌರವವನ್ನು ಇಲ್ಲಿಯವರೆಗೆ ನಾವು ನೀಡುತ್ತಾ ಬಂದಿದ್ದೆವೆ ಹೆಣ್ಣಮಕ್ಕಳು ಸಿಡಿದು ಎದ್ದರೆ ನಿಮ್ಮ ಕತೆ ಏನ ಆಗುತ್ತೆ ಎನ್ನುವುದು ಸ್ವಲ್ಪ ಯೋಚಿಸಿ…

ಯಮನಪ್ಪ ಗುಣಕಿ …
ಸಾಮಾಜಿಕ ಕಾರ್ಯಕರ್ತ ವಿಜಯಪುರ

Leave a Reply