ಬೆಳಗಾವಿ

ಬೆಳಗಾವಿ ನಗರದ 11 ಮನೆಗಳತನ ಮಾಡಿರುವ ಐದು ಆರೋಪಿಗಳ ಬಂಧನ

5Views

ಬೆಳಗಾವಿ ನಗರದ 11 ಮನೆಗಳ್ಳತನ ಪ್ರಕರಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 67 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಶುಕ್ರವಾರ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹನುಮಾನ ನಗರ, ಉಜ್ವಲನಗರ, ಅಜಮ ನಗರ ಮನೆಗಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಹಾಗೂ ಚಿನ್ನಾಭರಣ ಖರೀದಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ರಿಹಾನ್ ದಪೇದಾರ, ಮಲ್ಲಿಕ ಹುಬ್ಬಳ್ಳಿ, ಅರಮಾನ ಶೇಖ, ಕಳ್ಳತನ ಮಾಡುತ್ತಿ ಖಲೀಲ್ ಹುಬ್ಬಳ್ಳಿ, ಶಾನವಾಜ ಪಠಾಣ್ ಖರೀದಿ ಮಾಡುತ್ತಿದ್ದವರು. ಇವರಿಂದ 415 ಬಂಗಾರದ ಆರಭರಣ 1 ಕೆಜಿ 300 ಗ್ರಾಂ ಬೆಳ್ಳಿ ಸೇರಿದಂತೆ 16 ಲಕ್ಷ ರೂ. ಮೌಲ್ಯದ ಮನೆಗಳ್ಳತನ ಮಾಡುತ್ತಿದ್ದರು. ಮಾಳಮಾರುತಿ, ಎಪಿಎಂಸಿ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ ಎಂದರು.

ಕಳೆದ ಎರಡು ತಿಂಗಳಿನಿಂದ 225 ಮನೆಗಳ್ಳತನವಾಗಿಲ್ಲ. ಮನೆ ಬಿಟ್ಟು ಹೊರಗಡೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ, ಮನೆಯ ಬಳಿ ಪೊಲೀಸರನ್ನು ಗಸ್ತು ಹಾಕಲಾಗುವುದು. ಈಗಾಗಲೇ ಎರಡು ತಿಂಗಳಲ್ಲಿ ಮನೆಗಳ್ಳತನವಾಗಿರುವ ಪ್ರಕರಣ ವಾಗಿಲ್ಲ ಎಂದರು‌.
ಡಿಸಿಪಿ ನಿರಂಜನ ರಾಜೆ ಅರಸ, ಎಸಿಪಿ ಸಂತೋಷ ಸತ್ಯನಾಯಕ, ಸಿಪಿಐ ಬಿ.ಆರ್.ಗಡ್ಡೇಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply