Uncategorized

ಬೆಳಗಾವಿ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು: ಬಲಿ ಸಂಖ್ಯೆ 31ಕ್ಕೆ ಏರಿಕೆ

16Views
  • ಒಟ್ಟು 31 ಕೃಷ್ಣಮೃಗಗಳ ನಿಗೂಢ ಸಾವು; ‘ಗಳಲೇ ರೋಗ’ದ ಶಂಕೆ; ನಿರ್ಲಕ್ಷ್ಯ, ನೀರಿನ ಸಮಸ್ಯೆ ಬಗ್ಗೆ ತನಿಖೆ ಅಗತ್ಯ
    ಬೆಳಗಾವಿ:17.11.2025
    ಬೆಳಗಾವಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ (ಭೂತರಾಮನಹಟ್ಟಿ ಬಳಿ) ಕೃಷ್ಣಮೃಗಗಳ ನಿಗೂಢ ಸರಣಿ ಸಾವು ಮುಂದುವರಿದಿದ್ದು, ಸೋಮವಾರ ಬೆಳಗ್ಗಿನ ಜಾವ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪುವುದರೊಂದಿಗೆ ಬಲಿಯಾದ ಪ್ರಾಣಿಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಕೇವಲ ಕೆಲವೇ ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಕೃಷ್ಣಮೃಗಗಳು ಮೃತಪಟ್ಟಿರುವುದು ಪ್ರಾಣಿಪ್ರಿಯರು ಮತ್ತು ಅರಣ್ಯ ಇಲಾಖೆಯಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
    *ಸಾವು ಸಂಭವಿಸಿದ ವಿವರಗಳು:*
    * ನವೆಂಬರ್ 13: ಮೊದಲ ದಿನವೇ 8 ಕೃಷ್ಣಮೃಗಗಳು ಮೃತಪಟ್ಟಿದ್ದವು.
    * ನವೆಂಬರ್ 14 : ಒಂದೇ ದಿನ 20 ಕೃಷ್ಣಮೃಗಗಳು ಸಾವನ್ನಪ್ಪಿದ್ದವು.
    * ನವೆಂಬರ್ 15 : ಬೆಳಗ್ಗಿನ ಜಾವ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದೆ.
    ನವೆಂಬರ್ 16: ಮತ್ತೆರಡು ಸಾವು
    * ಒಟ್ಟು ಸಾವು: ಇದುವರೆಗೆ ಮೃತಪಟ್ಟ ಕೃಷ್ಣಮೃಗಗಳ ಸಂಖ್ಯೆ 31.
    * ಪ್ರಸ್ತುತ ಸ್ಥಿತಿ: ಮೃಗಾಲಯದಲ್ಲಿ ಇನ್ನುಳಿದ 7 ಕೃಷ್ಣಮೃಗಗಳಿಗೆ ವಿಶೇಷ ಆರೈಕೆ ಮುಂದುವರಿಸಲಾಗಿದೆ.
    *ಕಾರಣಗಳ ಕುರಿತು ಶಂಕೆ ಮತ್ತು ತನಿಖೆಗೆ ಆದೇಶ:*
    ಘಟನೆಗೆ ಸಂಬಂಧಿಸಿದಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
    ಸದ್ಯ, ಮೃಗಾಲಯಗಳ ಸದಸ್ಯ ಕಾರ್ಯದರ್ಶಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,  ಸೋಮವಾರ ಬೆಳಿಗ್ಗೆ ಮೃತದೇಹಗಳಿಗೆ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ವರದಿಯ ಪ್ರಕಾರ, ‘ಗಳಲೇ ರೋಗ’  ದಿಂದ ಈ ಸಾವುಗಳು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
    “ಮೃಗಾಲಯದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಕೃಷ್ಣಮೃಗಗಳ ಸಾವಿಗೆ ಸಿಬ್ಬಂದಿಗಳ ನಿರ್ಲಕ್ಷ್ಯ, ಕುಡಿಯುವ ನೀರಿನ ಸಮಸ್ಯೆ, ಅಥವಾ ಬೇರೆ ಯಾವುದೇ ನಿರ್ವಹಣೆಯ ಕೊರತೆಯೇ ಕಾರಣವೇ ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
    ಈ ಸರಣಿ ಸಾವುಗಳು ಮೃಗಾಲಯದ ನಿರ್ವಹಣೆ ಮತ್ತು ಕೃಷ್ಣಮೃಗಗಳ ರಕ್ಷಣಾ ಕ್ರಮಗಳ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತನಿಖೆಯ ವರದಿ ಮತ್ತು ಮುಂದಿನ ಕ್ರಮಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Leave a Reply