ಬೆಳಗಾವಿ

‘ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ’ ಶೀಘ್ರ ಲೋಕಾರ್ಪಣೆ*

6Views

ಫೆಬ್ರವರಿ 22 ರಂದು ಉದ್ಘಾಟನೆ: ಉತ್ತರ ಕರ್ನಾಟಕಕ್ಕೆ ಲಭ್ಯವಾಗಲಿದೆ ಅತ್ಯಾಧುನಿಕ 4D ರೋಬೋಟಿಕ್ ಶಸ್ತ್ರಚಿಕಿತ್ಸೆ

ಬೆಳಗಾವಿ:19.2.2026
ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಜನರಿಗೆ ವಿಶ್ವದರ್ಜೆಯ ನೇತ್ರ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ಒದಗಿಸುವ ನಿಟ್ಟಿನಲ್ಲಿ, ಬೆಳಗಾವಿಯ ನೆಹರು ನಗರದ ಕೊಲ್ಲಾಪುರ ವೃತ್ತದ ಬಳಿ ನಿರ್ಮಿಸಲಾಗಿರುವ ‘ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ’ ಹಾಗೂ ‘ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್’ ಫೆಬ್ರವರಿ 22 ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಸುಮಾರು 35 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಈ ಬೃಹತ್ ನೇತ್ರ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಹೊಂದಿದ್ದು, ಒಂದೇ ಸೂರಿನಡಿ ಕಣ್ಣಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

*ಪ್ರಮುಖ ತಂತ್ರಜ್ಞಾನ ಮತ್ತು ಸೌಲಭ್ಯಗಳು:*

ಈ ಭಾಗದಲ್ಲಿ ಮೊದಲ ಬಾರಿಗೆ ರೋಬೋಟಿಕ್ 4D ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಮುಕ್ತ ಜೀವನಕ್ಕಾಗಿ ಜರ್ಮನಿಯ ಸುಧಾರಿತ ZEISS MEL 90 ಎಕ್ಸೈಮರ್ ಲೇಸರ್ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.
ಇದು ಅತ್ಯಂತ ನಿಖರ, ಸುರಕ್ಷಿತ ಮತ್ತು ವೇಗವಾಗಿ ಗುಣಮುಖರಾಗಲು ಸಹಕಾರಿಯಾಗಿದೆ.
*ವಿಶೇಷ ವಿಭಾಗಗಳು:* ಕಣ್ಣಿನ ಪೊರೆ (ಕ್ಯಾಟರಾಕ್ಟ್), ಕಾರ್ನಿಯಾ, ರೆಟಿನಾ, ಗ್ಲುಕೋಮಾ, ಮಕ್ಕಳ ನೇತ್ರ ಚಿಕಿತ್ಸೆ, ಅಕ್ಯುಲೋಪ್ಲಾಸ್ಟಿ ಹಾಗೂ ನ್ಯೂರೋ-ಆಪ್ತಾಲ್ಮಾಲಜಿ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.
*ತಜ್ಞ ವೈದ್ಯರ ತಂಡ:* ಡಾ. ಅಮೋಘ ಲಕ್ಷಣ ಜಂಬಗಿ ಅವರ ನೇತೃತ್ವದಲ್ಲಿ ಪರಿಣಿತ ವೈದ್ಯರ ತಂಡವು ದಿನದ 24 ಗಂಟೆಯೂ ತುರ್ತು ಸೇವೆಗೆ ಲಭ್ಯವಿರಲಿದೆ.

*ಉದ್ಘಾಟನಾ ಸಮಾರಂಭ:*
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಪ್ರಭಾಕರ್ ಕೋರೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸೂಚಿತ), ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಅಮೋಘ ಜಂಬಗಿ ತಿಳಿಸಿದ್ದಾರೆ.

*ಸಾಮಾಜಿಕ ಕಾಳಜಿ:*
ಕೇವಲ ಲಾಭದ ಉದ್ದೇಶವನ್ನಷ್ಟೇ ಹೊಂದಿರದೆ, ಸಮಾಜದ ಎಲ್ಲಾ ವರ್ಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಆಸ್ಪತ್ರೆಯು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಡಿಯಲ್ಲಿ ಬಿಎಸ್ಸಿ ಆಪ್ಟೋಮೆಟ್ರಿ ಕೋರ್ಸ್ ಆರಂಭಿಸುತ್ತಿದ್ದು, ಹೈದರಾಬಾದ್‌ನ ವಿಶ್ವವಿಖ್ಯಾತ ಎಲ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆಯೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಂಡಿದೆ. ನಗದು ರಹಿತ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ವಿಮಾ ಯೋಜನೆಗಳ ಸೌಲಭ್ಯವೂ ಇಲ್ಲಿ ದೊರೆಯಲಿದೆ.
ಈ ಸಂದರ್ಭದಲ್ಲಿ ಡಾ. ವರ್ಷಾ ಜಂಬಗಿ, ಡಾ. ಲಕ್ಶ್ಮಣ ಜಂಬಗಿ, ಡಾ.ಜಗದೀಶ ಪಾಟೀಲ, ಡಾ. ಹೇಮಂತ ಮುಂತಾದವರು ಉಪಸ್ಥಿತರಿದ್ದರು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 82290 08221 / 08225

Leave a Reply