ಎಮಿನೆಂಟ್ ಕೋಚಿಂಗ್ ಕ್ಲಾಸ್ ಬೆಳಗಾವಿಯಲ್ಲಿ ಇಂದು ಧ್ಯಾನ ಯೋಗಿ ಜ್ಞಾನ ದಾಸೋಹಿ ನಡೆದಾಡುವ ದೇವರು ಶತಮಾನದ ಸಂತ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಮಂಜುನಾಥ್ ಜಿ ಕವಲಗಿ ಯವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸಿ ಮಾತನಾಡುತ್ತಾ ಮಹಾತ್ಮರು ದೇಹದಲ್ಲಿದ್ದಾಗ ಯಾವುದಾದರೂ ಒಂದೇ ಸ್ಥಳದಲ್ಲಿ ಸಿಗುತ್ತಾರೆ ದೇಹ ತ್ಯಾಗ ಮಾಡಿದಾಗ ಎಲ್ಲೆಲ್ಲಿಯೂ ದೊರೆಯುತ್ತಾರೆ ಅಂತವರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಒಬ್ಬರು ಅಂಥವರು ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕವನು ಅವರ ಸಾನಿಧ್ಯದಲ್ಲಿಯೇ ಇದ್ದು ಅವರ ಆಶೀರ್ವಾದದಿಂದಲೇ ಬೆಳೆದು ದೊಡ್ಡವನಾದ ನಾನು ಶ್ರೀಗಳ ಜ್ಞಾನದಾಸೋಹ ಮತ್ತು ಸತ್ಕಾರ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಮಾತನಾಡುತ್ತಿದ್ದೇನೆ.
ಸ್ವಾಮೀಜಿ ಅವರೆಂದರೆ ನವನೀತದಷ್ಟು ಮೃದು. ಸಾಗರದಷ್ಟು ಧ್ಯಾನ ಅಮೃತಕ್ಕೂ ಆಸೆ ಪಡದ ಶಕ್ತಿ ಪುರುಷ ಸರ್ವರಿಗೂ ಲೇಸನ್ನು ಬಯಸುವ ಮಹಾಪುರುಷ ತತ್ವಜ್ಞಾನಿ ಬಹುಭಾಷಾ ಪಂಡಿತ ಶತಮಾನದ ಸಂತ ನಡೆದಾಡುವ ಜೀವಂತ ದೇವರು ಎಷ್ಟು ವರ್ಣಿಸಿದರು ಶಬ್ದಗಳೇ ಸಾಲದು ಅವರ ಮೇರು ವ್ಯಕ್ತಿತ್ವಕ್ಕೆ.
ಭಾರತವೆಂದರೆ ಮಹಾನ್ ಪುರುಷರ ಪುಣ್ಯಭೂಮಿ ಎಂದು ಕರೆಸಿಕೊಂಡಿದೆ 20ನೇ ಶತಮಾನದಲ್ಲಿ ಕರುನಾಡಿನಲ್ಲಿ ಮತ್ತೊಬ್ಬ ಮಹಾಪುರುಷ ಈ ಭೂಮಿಗೆ ಬಂದು ಉಪನ್ಯಾಸ ಸರಣಿಯ ಮುಖಾಂತರ ಜ್ಞಾನ ದಾಸೋಹ ಕಾರ್ಯಕ್ರಮ ಕೈಗೊಂಡು ದೇಶಕ್ಕೆ ಅಷ್ಟೇ ಅಲ್ಲದೆ ವಿಶ್ವದ ಹಲವು ದೇಶಗಳಿಗೆ ಹೋಗಿ ಜನರಲ್ಲಿ ಜೀವನ ಪರಿವರ್ತನೆಗಳು ತಂದವರೆಂದರೆ ಪೂಜ್ಯ ಸಿದ್ದೇಶ್ವರ ಸ್ವಾಮಿಗಳು.
ಸ್ವಾಮೀಜಿಯವರು ಗಾಂಧೀಜಿ ಅವರಷ್ಟೇ ಸರಳ ಜೀವಿಗಳು ಶ್ವೇತವರ್ಣದ ಲುಂಗಿ ಕಿಸೆ ಇಲ್ಲದ ಅಂಗಿ ಮಿತವಾದ ಸಾತ್ವಿಕ ಆಹಾರ ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದ ಸ್ವಾವಲಂಬಿ. ಯಾವಾಗಲೂ ಅಧ್ಯಯನ ಅಧ್ಯಾಪನ ಮಾಡೋದು ಕಾಯಕ ಇಂಥವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಒಂದು ಕಡೆ ದುಃಖವಾದರೆ ಮತ್ತೊಂದೆಡೆ ಮಹಾಪುರುಷರ ಆಶೀರ್ವಾದ ಯಾವಾಗಲೂ ಇದ್ದು ಹಾಗೂ ಇವತ್ತಿಗೂ ಇದೆ ಎನ್ನುವ ಹೆಮ್ಮೆ ಮಕ್ಕಳೇ ನೀವು ಪ್ರತ್ಯಕ್ಷವಾಗಿ ಸ್ವಾಮೀಜಿಯವರನ್ನು ಕಂಡಿರಲಿಕ್ಕಿಲ್ಲ ಆದರೆ ಅವರ ಅಮರವಾಣಿ ಪುಸ್ತಕ ರೂಪದಲ್ಲಿ ಮಾಧ್ಯಮ ವಾಹಿನಿಗಳಲ್ಲಿ ನಿಮಗೆ ಬೇಕಾದಾಗ ಸಿಗುತ್ತದೆ ಓದಿ ಕೇಳಿ ಪುನೀತರಾಗಿ ಎಂದು ಕೇಳಿಕೊಂಡರು..
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಉದಯ್ ಇಡಗಲ್ ಚೇರ್ಮನರು ಸೆಂಟ್ ಜರ್ಮನ್ ಸ್ಕೂಲ್ ಸ, ಬೆಳಗಾವಿ ಅವರು ಮಾತನಾಡುತ್ತ ಸ್ವಾಮೀಜಿಯವರು ವಿದ್ಯುತ್ ಶಕ್ತಿ ಇದ್ದ ಹಾಗೆ ವಿದ್ಯುತ್ತನ್ನು ಹೊರಗಡೆಯಿಂದ ನೋಡಲಾಗದು ತಂತಿ ಮುಖಾಂತರ ಬಲಬಗೆ ಹಾಯಿಸಿದಾಗ ಬೆಳಕು ಚುಮ್ಮುತ್ತದೆ ಶ್ರೀ ಸಿದ್ದೇಶ್ವರ ಮಹಾತ್ಮರು ಕೂಡ ಹಾಗೆಯೇ ಶ್ರವಣದ ಮುಖಾಂತರ ಅವರು ಅಮೃತವಾಣಿ ಎನ್ನು ಆಲಿಸಿದಾಗ ಆತ್ಮದಲ್ಲಿ ಜ್ಞಾನದ ಬೆಳಕು ಮೂಡುತ್ತದೆ ಎಂದು ಮಾರ್ಮಿಕ ವಾಗಿ ನುಡಿದರೂ .
ಇದೆ ವೇಳೆಯಲ್ಲಿ ಮುಖ್ಯ ಅತಿಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ತರಬೇತಿ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶ ನೀಡಿದ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಬಹುಮಾನ ನೀಡಲಾಯಿತು ಹಲವಾರು ಶಿಕ್ಷಕರು ಮಕ್ಕಳ ಪ್ರಗತಿ ಕುರಿತು ಮಾರ್ಗದರ್ಶನ ಮಾಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿ ಎಸ್ ಕೌಲಗಿ ಯವರು ಉಪಸ್ಥಿತರಿದ್ದರು ಶ್ರೀ ಸದಾಶಿವ್ ಪಿ ಸೊರಗಾವಿ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ನುಡಿ ಹೇಳಿದರೆ ಕುಮಾರಿ ಕಮಲಾ ಗೋರಗುದ್ದಿ ಪ್ರಾರ್ಥನೆ ಹಾಡಿದರು ಕುಮಾರಿ ಅಕ್ಷತಾ ಮಹಾಜನ್ ಕಾರ್ಯಕ್ರಮ ನಿರೂಪಣೆ ಮಾಡಿದರೆ ಆಡಳಿತ ಅಧಿಕಾರಿಗಳಾದ ಸದಾನಂದ್ ಬಡ್ದುರು ವಂದನಾರ್ತನೆ ಸಲ್ಲಿಸಿದರು.





