ವಂದೇ ಭಾರತ್ ಸಮಯ ಬದಲಾವಣೆ, ಹೊಸ ಸೂಪರ್ ಫಾಸ್ಟ್ ರೈಲು ಮಾರ್ಗ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಹತ್ವದ ಚರ್ಚೆ
ಬೆಳಗಾವಿ: 4.12.2025
ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ್ ಅವರು ಡಿಸೆಂಬರ್ 3, 2025 ರಂದು ನವದೆಹಲಿಯ ಸಂಸದ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳ ಕುರಿತು ಮಹತ್ವದ ಮನವಿ ಸಲ್ಲಿಸಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶಿವಬಸವ ಮಾಹಾಪ್ರಭು ಅವರ ಹೆಸರು ನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
*ನಾಮಕರಣ ಪ್ರಕ್ರಿಯೆಗೆ ಚುರುಕು*
ಬೆಳಗಾವಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ರೈಲು ನಿಲ್ದಾಣಕ್ಕೆ “ಡಾ. ಶಿವಬಸವ ಮಾಹಾಪ್ರಭು ಬೆಳಗಾವಿ ರೈಲು ನಿಲ್ದಾಣ” ಎಂದು ಹೆಸರಿಡುವ ಪ್ರಕ್ರಿಯೆಗೆ ಚುರುಕು ನೀಡಲು ಸಂಸದ ಶೆಟ್ಟರ್ ಅವರು ಮನವಿ ಮಾಡಿದರು. ಈ ಕುರಿತ ಪ್ರಸ್ತಾವನೆಯು ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿದೆ. ಪ್ರಸ್ತಾವನೆಗೆ ರೈಲ್ವೆ ಸಚಿವಾಲಯದ ಅಭಿಪ್ರಾಯವನ್ನು ಗೃಹ ಸಚಿವಾಲಯಕ್ಕೆ ಶೀಘ್ರವೇ ಕಳುಹಿಸಿದ್ದಲ್ಲಿ, ನಾಮಕರಣ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಶೆಟ್ಟರ್ ಅವರು ಸಚಿವರಿಗೆ ಮನದಟ್ಟು ಮಾಡಿದರು. ಇದಕ್ಕೆ ಸಚಿವರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಯಾಣಿಕ ಸ್ನೇಹಿ ವಂದೇ ಭಾರತ್ ಸಮಯ ಪರಿವರ್ತನೆ
ಪ್ರಸ್ತುತ ಬೆಳಗಾವಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿಯಿಂದ ಪ್ರಸ್ತುತ ಬೆಳಗ್ಗೆ 5:20ಕ್ಕೆ ಇರುವ ನಿರ್ಗಮನ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕಾಗಿ 6:15ಕ್ಕೆ ಪರಿವರ್ತಿಸುವಂತೆ ಬೇಡಿಕೆ ಇಡಲಾಯಿತು. ಈ ಕುರಿತು ಬೆಳಗಾವಿ ನಿವಾಸಿಗಳ ಅನುಕೂಲಕ್ಕೆ ಪೂರಕವಾಗಿ ಪರಿಗಣಿಸುವುದಾಗಿ ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಶೀಘ್ರವೇ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸುವಂತೆ ಜಗದೀಶ ಶೆಟ್ಟರ್ ಅವರು ವಿನಂತಿಸಿದರು. ಇದು ವಾಣಿಜ್ಯ ಮತ್ತು ಪ್ರವಾಸಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ವಿವರಿಸಿದರು.
*ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುಮೋದನೆ ಭರವಸೆ*
ಮುಂದುವರೆದು, ಉತ್ತರ ಕರ್ನಾಟಕದ ರೈಲ್ವೆ ಜಾಲ ವಿಸ್ತರಣೆಗೆ ಅತ್ಯಗತ್ಯವಾಗಿರುವ ಲೋಕಾಪೂರ – ರಾಮದುರ್ಗ – ಸವದತ್ತಿ – ಧಾರವಾಡ ನಡುವಿನ ನೂತನ ರೈಲು ಮಾರ್ಗ ನಿರ್ಮಾಣದ ಕುರಿತು ನಡೆಸುವ ಸಮೀಕ್ಷೆಯ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಲಾಯಿತು. ಈ ಪ್ರಸ್ತಾವನೆಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡುವ ಬಗ್ಗೆಯೂ ಸಚಿವ ಅಶ್ವಿನಿ ವೈಷ್ಣವ್ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವರೊಂದಿಗಿನ ಈ ಮಹತ್ವದ ಚರ್ಚೆಯ ನಂತರ, ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರೊಂದಿಗೂ ಈ ವಿಷಯಗಳ ಕುರಿತು ಚರ್ಚಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
ಬೆಳಗಾವಿ ನಗರದ 11 ಮನೆಗಳತನ ಮಾಡಿರುವ ಐದು ಆರೋಪಿಗಳ ಬಂಧನ
ಬೆಳಗಾವಿ ನಗರದ 11 ಮನೆಗಳ್ಳತನ ಪ್ರಕರಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 67 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್...
ಬೀಜ ಕೊರತೆ ಆಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ
ಬೆಳಗಾವಿ, ಏ.15(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆ ಆಗದಂತೆ ನಿಗಾವಹಿಸುವುದರ ಜೊತೆಗೆ ಸಾಧ್ಯವಾದಷ್ಟು ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವಂತೆ...
ಮಹಾವೀರ ಜಯಂತಿ ಆಚರಣೆಗೆ ತಹಶೀಲ್ದಾರ್ ಅಸಹಕಾರ: ಜೈನ ಸಮುದಾಯದ ಆಕ್ರೋಶ
ಆಡಳಿತ ನಿರ್ಲಕ್ಷ್ಯದ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು; ಬಹಿರಂಗ ಕ್ಷಮೆಯಾಚನೆಗೆ ಆಗ್ರಹ ಬೆಳಗಾವಿ:10.4.2026 ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಯ ಆಚರಣೆಯ ವಿಷಯದಲ್ಲಿ...
ರೈತನ ಮಗಳ ಪಿಯುಸಿ ಸಾಧನೆ
ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ...
‘ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ’ ಶೀಘ್ರ ಲೋಕಾರ್ಪಣೆ*
ಫೆಬ್ರವರಿ 22 ರಂದು ಉದ್ಘಾಟನೆ: ಉತ್ತರ ಕರ್ನಾಟಕಕ್ಕೆ ಲಭ್ಯವಾಗಲಿದೆ ಅತ್ಯಾಧುನಿಕ 4D ರೋಬೋಟಿಕ್ ಶಸ್ತ್ರಚಿಕಿತ್ಸೆ ಬೆಳಗಾವಿ:19.2.2026 ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಜನರಿಗೆ ವಿಶ್ವದರ್ಜೆಯ ನೇತ್ರ...





