ಇವತ್ತು ಗೋಕಾಕ್ ತಾಲೂಕ್ ಖನಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ 10 ಅಂಗನವಾಡಿ ಕೇಂದ್ರಗಳಿಗೆ 38 ಟೇಬಲ್, 250 ಕುರ್ಚಿ ಹಾಗೂ ಆಟಿಕೆಗಳನ್ನು ಯುವ ಮುಖಂಡರಾದ ಶ್ರೀಯುತ ಅಮರನಾಥ ರಮೇಶ್ ಜಾರಕಿಹೊಳಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಹಸ್ತಾಂತರ ಮಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀಯುತ ಮಂಜುನಾಥ್ ಮೊಕಾಶಿ, ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗೋಕಾಕ್ ಶ್ರೀಯುತ D.S.ಕೂಡವಕ್ಕಲಗಿ, ವಲಯ ಮೇಲ್ವಿಚಾರಕರು ಶ್ರೀಮತಿ ಯಶೋದಾ ಸಂಕನ್ನವರ ಭಾಗವಹಿಸಿದ್ದರು..
ಶಿಕ್ಷಣವೇ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯದ ಅಡಿಪಾಯ. ಅದರಲ್ಲೂ ಗುಣಮಟ್ಟದ ಶಿಕ್ಷಣ ಅತೀ ಮುಖ್ಯ. ಮಗುವಿನ ಬಾಲ್ಯದಿಂದಲೇ ಒಳ್ಳೆ ಶಿಕ್ಷಣ ನೀಡುವುದು ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸುತ್ತದೆ.
ಪ್ರಾಥಮಿಕ ಶಿಕ್ಷಣದ ಮೇಲೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.
ಸಮೀಕ್ಷೆಯೊಂದರ ಪ್ರಕಾರ 6 ವರ್ಷ ಒಳಗಿನ ಮಕ್ಕಳ ಮೆದುಳಿನ ಬೆಳವಣಿಗೆ 90% ಆಗುತ್ತದೆ. ಕಾರಣ ಈ ವಯಸ್ಸಿನ ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳ ಮೂಲಕ ಕಾರ್ಯನಿರತವಾಗಿದೆ.

ಇತ್ತೀಚೆಗೆ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡು ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಕೊಡಿಸಲು ಪಾಲಕರು ಮಕ್ಕಳನ್ನು ಸರ್ಕಾರದ ಅಂಗನವಾಡಿ ಕೇಂದ್ರಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ಪೈಪೋಟಿ ಮೇಲೆ ಕಳಿಸುವದು ಸಾಮಾನ್ಯವಾಗಿದೆ.. ಕಾರಣ ತಿಳಿದಾಗ ಮೊದಲನೆಯದಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಆಕರ್ಷಕ ಮತ್ತು ಸುಸಜ್ಜಿತ ಕಟ್ಟಡ ಆಟಿಕೆಗಳ ಪರಿಣಾಮ ಇದು ಕೂಡ ಒಂದು.

ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತ ಹೋಗುವುದನ್ನು ತಡೆಯಲು, ನಮ್ಮ ಕೇಂದ್ರಗಳನ್ನು ಸುಸಜ್ಜಿತಗೋಳಿಸಿ ಮಕ್ಕಳಿಗೆ ಆಟದ ಜೊತೆ ಪಾಠ ಹಾಗೂ ಪೋಷಣಯುಕ್ತ ಸದೃಢ ಮಗುವಿನ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಅಂಗನವಾಡಿ ಕೇಂದ್ರಗಳಲ್ಲಿ ಪಠ್ಯ ಪೂರಕ ಸಾಮಗ್ರಿಗಳನ್ನು ಕಲ್ಪಿಸುವ ಸದುದ್ದೇಶದಿಂದ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಆಸಕ್ತಿ ವಹಿಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಅನುಮತಿಯೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕೇಂದ್ರಗಳಿಗೆ ಟೇಬಲ್, ಕುರ್ಚಿ, ಆಟಿಕೆಗಳನ್ನು ಈ ದಿನ ಕೊಟ್ಟಿದ್ದು ಅವರಿಗೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಧನ್ಯವಾದ ತಿಳಿಸುತ್ತೇವೆ..





