ಬೆಳಗಾವಿಯಿಂದ ಮಹಾರಾಷ್ಟ್ರದ ಸುಳಗಾ ಗ್ರಾಮದ ಬಳಿಯಿರುವ ದಾಭಾ ಬಳಿ ಕಾರ ಚೆಕ್ ಮಾಡಿದಾಗ ಆರು ಜನ ಆರೋಪಿಗಳು ಸುಮಾರು 50 ಕೆಜಿ ನಷ್ಟು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿರುವದಾಗಿ ಬೆಳಗಾವಿ ಕಮೀಷನರ್ ಗುಲಾಬರಾವ್ ಬೊರಸೆ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ವಿಷಯ ತಿಳಿಸಿದ ಅವರು, ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರಿನಲ್ಲಿ ಬರುತ್ತಿದ್ದ ಗಾಂಜಾ ಧಂಧೆಯಲ್ಲಿ ಇಸ್ಮಾಯಿಲ್ ಹಾಗೂ ತಾಜೀರ್ ಎಂಬ ಆರೋಪಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಅತಿದೊಡ್ಡ ಗಾಂಜಾ ಜಾಲ ಬಯಲಿಗೆ ಬಂದಿದೆ. ಕೊಲ್ಹಾಪುರದ ಪ್ರಥಮೇಶ, ಹುಕ್ಕೇರಿ ತಾಲೂಕಿನ ತೇಜಸ ವಜಾರೆ, ಕೊಲ್ಹಾಪುರದ ಶಿವಕುಮಾರ ಅಸಾಬೆ, ಸಾತಾರಾದ ರಂಜಾನ್ ಜಮಾದಾರ ಸೇರಿ ಒಟ್ಟು ಆರು ಜನ ಆರೋಪಿಗಳು ಸೇರಿಕೊಂಡು ಸಾಗಿಸುತ್ತಿದ್ದ ಸುಮಾರು 50 ಕೆಜಿ ಗಾಂಜಾದೊಂದಿದೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿಸಿದರು.
ಅದಲ್ಲದೇ ಇವರ ಬಳಿಯಿದ್ದ 10 ಮೊಬೈಲ್ ಗಳು, ಒಂದು ಮಚ್ಚು, ಒಂದು ತೂಕದ ಮಷಿನ್, 4000/- ರೂ ನಗದು ವಶಕ್ಕೆ ಪಡೆದು ಕೃತ್ಯಕ್ಕೆ ಬಳಿಸಿದ ಮೂರು ಕಾರನ್ನು ಪೊಲೀಸರು ಜಪ್ತ ಮಾಡಿ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುದಾಗಿ ಕಮೀಷನರ್ ತಿಳಿಸಿದರು.
ಮೊದಲ ಬಾರಿಗೆ ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಹಾಗೂ ದಲ್ಲಾಳಿ ಇಸ್ಮಾಯಿಲ್ ಅಲಿಯಾಸ್ ಸದ್ದಾಮ್ ನನ್ನು ಪೊಲೀಸರು ಬಂಧಿಸಿದ್ದು, ಈತ ಮಧ್ಯಪ್ರದೇಶ ಹಾಗೂ ಓಡಿಸ್ಸಾದಿಂದ ಗಾಂಜಾ ತಂದು ಮಾರುತ್ತಿದ್ದ, ಹಾಗೂ ಪುಣೆ ಮತ್ತು ಮುಂಬೈನಿಂದ ಹೆರಾಯಿನ ಪೂರೈಕೆ ಮಾಡುತ್ತಿರುವುದಾಗಿ ತಿಳಿದಿದೆ. ಈ ಗಾಂಜಾ ದಾಳಿಯು ಇಲ್ಲಿಯವರೆಗೆ ನಡೆದಿರುವ ಅತಿ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
CEN ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೆಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಸುಮಾರು ದಿನಗಳಿಂದ ಬೆನ್ನಟ್ಟಿ ನಡೆಸಲಾಗಿದೆ. ಈ ಪ್ರಕರಣ ಭೇದಿಸುದಕ್ಕಾಗಿ ಪಿಐ ಗಡ್ಡೆಕರ ಮುಂಬೈ ಹಾಗೂ ಇತರೆ ನಗರಗಳನ್ನು ಸುತ್ತಾಡಿ ಖಚಿತ ಮಾಹಿತಿ ಪಡೆದು ದಾಳಿಯ ರೂಪರೇಷೆಯನ್ನು ರಚಿಸಿ ಕೊನೆಗೆ ಒಂದು ದೊಡ್ಡ ಸಮಾಜ ಘಾತುಕ ಕೃತ್ಯವನ್ನು ಸೆದೆಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಅಲ್ಲದೇ ಈ ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸಿಸುವದಾಗಿ ತಿಳಿಸಿದರು.





