ಬೆಳಗಾವಿ ಜಿಲ್ಲೆ ಖಾನಾಪುರ–ಬಿಡಿ ಮುಖ್ಯರಸ್ತೆಯ ನಂದಗಡದ ಬಳಿ ಇರುವ ವನ್ನವಾ ದೇವಿ ದೇವಾಲಯದ ಸಮೀಪ ಬೈಕ್ KA 22 ER. 9120 ಹಾಗೂ ಶಾಲಾ ಬಸ್ KA 22 D. 0461 ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಮೇಲಿದ್ದ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟ ಯುವಕನನ್ನು ಮಾರೂತಿ ಉಮೇಶ್ ಕೊಡೋಳಿ (ವಯಸ್ಸು 19, ಸಾ. ಆವರೋಳಿ) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯುವಕನ ಹೆಸರು ವಿಠ್ಠಲ್ ಅಲಿಯಾಸ್ ಶಶಿಧರ ಫಕೀರ ಗಂಜಿ (ವಯಸ್ಸು 19, ಮೂಲತಃ ಕಾಮಶೀನಕೊಪ್ಪ, ಪ್ರಸ್ತುತ ಸಾ. ಆವರೋಳಿ) ಎಂದು ತಿಳಿದುಬಂದಿದೆ.

ಅಪಘಾತದ ನಂತರ ಮಾರೂತಿ ಕೊಡೋಳಿ ಅವರ ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಾಗಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ವಿಠ್ಠಲ್ ಗಂಜಿ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ವರದಿ. ವಿನೋದ್. ಎಂ. ಜೆ.
ಬೆಳಗಾಂವಿ





