ವಿಜಯಪುರ ನಗರದ ಸುತ್ತಮುತ್ತಲಿನಲ್ಲಿರುವ ರಸ್ತೆಗಳು ಹದಗೆಟ್ಟು ಹೋಗಿದೆ ರಸ್ತೆಗಳ ಮಧ್ಯೆ ತೆಗ್ಗು ಗುಂಡಿಗಳು ಬಿದ್ದಿರುವುದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ.
ರಸ್ತೆಯ ಗುಂಡಿಗಳು ಮಳೆನೀರಿಗೆ ಕಾಣುತ್ತಿಲ್ಲ ಬೈಕ್ ಸವಾರರು ರಸ್ತೆಗಳನ್ನು ನೋಡಿ ಪರದಾಡುವಂತಹ ಪರಿಸ್ಥಿತಿ ಬಂದಿದೆ
ಕೋಟಿ ಕೋಟಿ ರೂ ಗಳಲ್ಲಿ ರಸ್ತೆ ಕಾಮಗಾರಿ ಆದರೂ ಮತ್ತೆ ರಸ್ತುಗಳ ಮದ್ಯ ಬಿದ್ದಿರುವ ಗುಂಡಿಗಳಿಗೆ ಜನರು ಭಯ ಬೀತರಾಗಿದ್ದಾರ
. ಸಂಬಂದಿಸಿದ ಅಧಿಕಾತಿಗಳು ಇಲಾಖೆಯವರು ನಗರ ಶಾಸಕರು ಮಹಾನಗರ ಪಾಲಿಕೆಯ ಆಯುಕ್ತರು ಕಂಡು ಕಾಣದಂತಿರುವುದನ್ನು ನೋಡಿದರೆ ನಮ್ಮ ನಗರದ ಅಭಿವೃದ್ಧಿಯ ಕಡೆ ಯಾರ ಗಮನವು ಇಲ್ಲದಂತಾಗಿದೆ

ಇಂದು ವಿಜಯಪುರ ನಗರದಲ್ಲಿ ಗೋಲ್ ಗುಂಬಜ್ ಪೋಲಿಸ್ ಠಾಣೆ ಎದುರುಗಡೆ ರೈಲ್ವೆ ಸೇತುವೆ ಎರುವ ರಸ್ತೆಯಲ್ಲಿ ದೊಡ್ಡದಾದ ಗುಂಡಿ ಬಿದ್ದಿದ್ದು ಬಹುದಿನಗಳಾದರು ಯಾರು ಇದರ ಬಗ್ಗೆ ಗಮನ ಹರಿಸಿಲ್ಲ ಕೆಲಸದ ನಿಮಿತ್ಯ ದಲಿತ ಮುಖಂಡರು ಆ ಕಡೆ ಹೊದಾಗ ಅದನ್ನು ಗಮನಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾದರು
ಜನಪರ ಹೊರಾಟದ ಜೊತೆಗೆ ಜನಪರ ಕಾಳಜಿಯು ಇರಲಿ ಎಂಬ ಮನದಾಸೆಯೊಂದಿಗೆ ಸಮಾಜದ ಎಲ್ಲಾ ಜನರ ಪರವಾಗಿ ನಾವು ಇದ್ದೇವೆ ಎಂಬ ಮನೋಬಾವ ಹೊಂದಿದ ಮುಖಂಡರು ರಸ್ತೆಯ ಗುಂಡಿ ಮುಚ್ಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ,ಸಾಮಾಜಿಕ ಕಾರ್ಯಕರ್ತ ಯಮನಪ್ಪ ಗುಣಕಿ,
ಯಮನಪ್ಪ ಸಿದರಡ್ಡಿ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು.
ಚನ್ನು ಕಟ್ಟಿಮನಿ ಸಂಘಟನಾ ಸಂಚಾಲಕ.ಪಿಂಟು ನಾಟೀಕಾರ, ಸಿದ್ದು ಸೇರಿ ಐದು ಜನ ಮುಖಂಡರು ಭಾಗಿಯಾಗಿದ್ದರು…

