ಬೆಳಗಾವಿ ಜಿಲ್ಲೆ ಖಾನಾಪೂರ ತಹಸಿಲ್ದಾರ ಮುಖಾಂತರ
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಒಳಮೀಸಲಾತಿ ವಿಚಾರಣಾ ಆಯೋಗದ ವರದಿಯಲ್ಲಿ ಛಲವಾದಿ ಹೊಲೆಯ ಬಲಗೈ ಸಮುದಾಯಕ್ಕೆ ನ್ಯಾಯಸಮ್ಮತ ಮೀಸಲಾತಿ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮತ್ತು ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು

ಪ್ರಕಾಶ ಮಾದರ ಮಾತನಾಡಿ, ಬುಧವಾರ ಬೆಳಗಾವಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ವಿವಿಧ ತಾಲೂಕುಗಳಿಂದ ಸುಮಾರು 1500ಕ್ಕೂ ಹೆಚ್ಚು ಜನರು ಭಾಗವಹಿಸಿದರು. ವರದಿಯಲ್ಲಿ ಛಲವಾದಿ ಹೊಲೆಯ ಬಲಗೈ ಸಮುದಾಯದ ಜನಸಂಖ್ಯೆ ಮತ್ತು ಹಿಂದುಳಿದ ಸ್ಥಿತಿಗೆ ಸರಿಹೊಂದುವಂತೆ ಮೀಸಲಾತಿ ನೀಡದಿರುವುದು ದುಃಖಕರವಾದದ್ದು ಹಾಗೂ ತಕ್ಷಣವೇ ಈ ಅಸಮತೋಲನ ಸರಿಪಡಿಸಬೇಕು ಇಲ್ಲವಾದರೆ ನಿವೃತ್ತ ದಲಿತ ನ್ಯಾಯಮೂರ್ತಿಗಳು ಅದಿಕಾರಿಗಳನ್ನೊಳಗೊಂಡು ಉಘ್ರವಾದ ಪ್ರತಿಭಟನೆ ಮಾಡಲಾಗುವದೆಂದು ಸರ್ಕಾರವನ್ನು ಆಗ್ರಹಿಸಿದರು.

ರಾಜಶೇಖರ ಹಿಂಡಲಗಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದಿಂದ ಜಾತಿ ಸಮೀಕ್ಷೆ ನಡೆದಿತ್ತು. ಒಳ ಮೀಸಲಾತಿ ಸಮೀಕ್ಷೆಯಲ್ಲಿ ಎಡಗೈ, ಬಲಗೈ ಎನ್ನುವ ತಾರತಮ್ಯದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮೀಕ್ಷೆಯಲ್ಲಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಖಾನಾಪೂರ ತಾಲೂಕಾಧ್ಯಕ್ಷ ಈರಪ್ಪಾ ಮಾದರ, ಭರಮಣ್ಣಾ ಕೋಲಕಾರ, ಸಂತೋಷ ಮಾದರ, ರಾಜು ಖಾತೇದಾರ, ಬಸವರಾಜ ಮಾದರ, ಸುರೇಶ ಶಿಂಗೆ, ಸಂಜಯ ಮಾದರ, ವಿಲಾಸ ಮಾದರ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು





