ದಕ್ಷಿಣ ಕಾಶಿ ಎಂದ ಪ್ರಸಿದ್ದಿ ಹೊಂದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ವಿಶೇಷ ಪೂಜೆ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಬೆಳಗಾವಿಯ ಶಾಹಾಪುರದಲ್ಲಿ ಇರುವ ಕಪಿಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿಯಿಂದಲೇ ಭಕ್ತರು ಸಾಲುಗಟ್ಟಿ ನಿಂತು, ದೇವರ ದರ್ಶನ ಪಡೆದಿದ್ದಾರೆ.

ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಾಂಕರ ಮಾಡಿ, ವಿವಿಧ ರೀತಿಯ ಪೂಜೆಗಳನ್ನು ಆಯೋಜನೆ ಮಾಡಲಾಗಿದೆ.
ಕಪಿಲೇಶ್ವರ ಮಂದಿರದಲ್ಲಿ ಸೋಮವಾರ ರಾತ್ರಿ ಶ್ರಾವಣ ಮಾಸದ ಪ್ರಯುಕ್ತ ಕಪಿಲೇಶ್ವರನಿಗೆ ವಿವಿಧ ಖಾದ್ಯಗಳನ್ನು ನೈವಿದ್ಯ ಹಿಡಿಯಲಾಯಿತು. ಪ್ರತಿ ಶ್ರಾವಣ ಮಾಸದ ಸೋಮವಾರ ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಭಕ್ತರು ನಿತ್ಯ ಉಪವಾಸ ಮಾಡಿ ರಾತ್ರಿ ಕಪಿಲೇಶ್ವರನಿಗೆ ನೈವಿದ್ಯ ಹಿಡಿದು ಜಾಗರಣೆ ಮಾಡಿ ಭಕ್ತಿ ತೋರಿಸುವ ಮೂಲಕ ಕಪಿಲೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.
ಶ್ರಾವಣ ಮಾಸದ ಕೊನೆಯ ಸೋಮವಾರ ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಕಪಿಲೇಶ್ವರನ ಪ್ರೀತಿಗೆ ಪಾತ್ರರಾದರು.





