ಬೆಳಗಾವಿ

ಖಾನಾಪುರ್ ತಾಲೂಕಿನ ನಿಡಗಲ್ ಗ್ರಾಮದ ಮರಾಠ ಸಮುದಾಯದ ಪ್ರೇಮ ವಿವಾಹವಾದ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ನ್ಯಾಯಕ್ಕಾಗಿ ದಂಪತಿಗಳು ದಲಿತ ಸಂಘಟನೆಯ ಮೊರೆ .

6Views

ಇಂದು ಖಾನಾಪುರ್ ತಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ವತಿಯಿಂದ ಬಹಿಷ್ಕಾರಕ್ಕೆ ಒಳಗಾದ ಕೀರ್ತಿ. ಬೂತನಾಥ್. ಕದಂ ಅವರ ಎರಡು ಕುಟುಂಬಕ್ಕೆ ನಿಡಗಲ್ ಗ್ರಾಮದ ಪಂಚರಿಂದ 2022 ರಲ್ಲಿ ದಂಪತಿಗಳು ಪ್ರೇಮ ವಿವಾಹವಾಗಿದ್ದು ಇದನ್ನು ವಿರೋಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿರುತ್ತಾರೆ. ಅವರಿಗೆ ಊರಿನಲ್ಲಿ ದೇವಸ್ಥಾನ ಪ್ರವೇಶ ನಿರ್ಬಂಧ. ಸಭೆ ಸಮಾರಂಭಗಳಿಗೆ ನಿರ್ಬಂಧ. ಸ್ಮಶಾನ ನಿರ್ಬಂಧ. ಅಂಗನವಾಡಿ ಹೋಗುವ ಮಕ್ಕಳಿಗೆ ನಿರ್ಬಂಧ. ಮತ್ತು ಊರಿನ ಜನರು ಅವರೊಂದಿಗೆ ಮಾತನಾಡಿದರೆ. ವ್ಯವಹರಿಸಿದರೆ. ಮತ್ತು ಕೂಲಿ ಕೆಲಸಕ್ಕೆ ಕರೆದುಕೊಂಡರೆ. 11,000 ದಂಡ ವಿಧಿಸಲಾಗುವುದು ಎಂದು ಊರಿನ ಗ್ರಾಮಸ್ಥರಿಗೆ ಪಂಚ್ ಕಮಿಟಿಯವರು ಎಚ್ಚರಿಕೆ ನೀಡಿದ್ದಾರೆ ತದನಂತರ ಕಳೆದ ನಾಲ್ಕು ತಿಂಗಳ ಹಿಂದೆ ಭೂತನಾಥ್ ಅವರ ತಂದೆ ತೀರಿಕೊಂಡಾಗ ಅವರಿಗೆ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ನಿಷೇಧಿಸಿದರು. ಮತ್ತು ಕೊನೆಗೆ 31,000 ದಂಡವನ್ನು ಕಟ್ಟಿಸಿಕೊಂಡು ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿದರು ತದನಂತರ ನಮ್ಮ ಎರಡು ಕುಟುಂಬಗಳು ಸೇರಿ ಅಂಚೆ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ. ಮಾನ್ಯ ಎಸ್ ಪಿ ಸಾಹೇಬರಿಗೆ ಹಾಗೂ ಖಾನಾಪುರ ಸಿ ಪಿ ಐ ಸಾಹೇಬರಿಗೆ ನಮ್ಮ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಅರ್ಜಿಯನ್ನು ಇದುವರೆಗೂ ಸಲ್ಲಿಸಿದ್ದೇವೆ ಆದರೆ ಇದುವರೆಗೂ ನಮ್ಮ ಕುಟುಂಬಗಳಿಗೆ ಯಾವುದೇ ನ್ಯಾಯ ಸಿಕ್ಕಿರುವುದಿಲ್ಲ ಎಂದು ಸಂಘಟನೆಯ ಗಮನಕ್ಕೆ ತಂದಿರುತ್ತೇವೆ .

ಈ ದಿನ ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ಮಾನ್ಯ ತಶಿಲ್ದಾರ್ ಅವರಿಗೆ ಈ ಬಹಿಷ್ಕಾರಕ್ಕೆ ಒಳಪಟ್ಟ ಎರಡು ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹಿಂಡಲಗಿ ತಾಲೂಕ ಅಧ್ಯಕ್ಷ ರಾಘವೇಂದ್ರ ಚಲವಾದಿ ಉಪಾಧ್ಯಕ್ಷ ಮಾರುತಿ ಕಾಂಬಳೆ ಹಕ್ಕಿಪಿಕ್ಕಿ ಸಮುದಾಯದ ಮುಖಂಡ ದಯಾನಂದ್ ಆದಿವಾಸಿ ರವಿಮಾದಾರ್ ಬಸವರಾಜ್ ಮಾದಾರ್ ಹಾಗೂ ನೊಂದ ಕುಟುಂಬ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply