ಕೊಳಚೆ ಮತ್ತು ಅನೈತಿಕ ಚಟುವಟಿಕೆ ತಾನವಾಗಿರುವ ಅಂಗನವಾಡಿ ಕಟ್ಟಡ ಹಾಗೂ ಪ್ರೌಢಶಾಲೆ ಎಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವೇ ಇಲ್ಲ..
ಬೈಲಹೊಂಗಲ್. ಶಾಸಕರು. ತಾಲೂಕ ಪಂಚಾಯಿತಿ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಡಿಪಿಓ ಅಧಿಕಾರಿ ನೋಡಲೇಬೇಕಾದ ವರದಿ..
ಬೆಳಗಾವಿ ಜಿಲ್ಲೆ ಬೈಲಹೊಂಗಲ್ ತಾಲೂಕಿನ ವನ್ನೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಹೇಳುವವರಿಲ್ಲ ಕೇಳುವವರಿಲ್ಲ ಅಂತಾಗಿದೆ..
ಹೌದು ವೀಕ್ಷಕರೇ
ಬೈಲಹೊಂಗಲ್ ತಾಲೂಕಿನ ವನ್ನೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜನತಾ ಕಾಲನಿಯಲ್ಲಿ ಇರುವ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಸುತ್ತು ಕಸ ಗಿಡಗಂಟಿಗಳು ಮತ್ತು ಕೊಳಚೆ ನೀರು ಇದ್ದು ಆ ಶಾಲೆಯ ಮಕ್ಕಳಿಗೆ ಯಾರು ಕೇಳೋರಿಲ್ಲ ಹೇಳೋರಿಲ್ಲ..
ವನ್ನುರಿನ ಜನತಾ ಕಾಲೋನಿಯಲ್ಲಿ ಸುಮಾರು 30 ವರ್ಷಗಳಿಂದ ಜನ ವಾಸವಿದ್ದು 2007-08ನೇ ಸಾಲಿನಲ್ಲಿ ಅಂಗನವಾಡಿಯನ್ನು ನಿರ್ಮಿಸಲಾಗಿತ್ತು ಆ ಅಂಗನವಾಡಿಯಲ್ಲಿ ಕೂಡ ಕಳೆದು ಸುಮಾರು 17 -18 ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯೇ ಇಲ್ಲ ಮತ್ತು ಸ್ಥಾಪನೆಯಾದ ಆರು ತಿಂಗಳಲ್ಲಿಯೇ ಅಂಗನವಾಡಿ ಕೇಂದ್ರ ಮುಚ್ಚಲಾಗಿದೆ ಯಾವ ಅಧಿಕಾರಿಯೂ ಕೂಡ ಇನ್ನೂವರೆಗೆ ಆ ಅಂಗನವಾಡಿಯಲ್ಲಿ ಏನು ನಡೆದಿದೆ ಅಂತ ಯಾರೂ ಕೂಡ ಬಡ ಜನರಿಗೆ ಕೇಳಲೇ ಇಲ್ಲ..
ಆ ಜನತಾ ಕಾಲೋನಿಯಲ್ಲಿ ಸುಮಾರು 120ಕ್ಕೂ ಹೆಚ್ಚು ಮನೆಗಳಿದ್ದು ಅಲ್ಲಿಯ ಜನರಿಗೆ ಶೌಚಾಲಯ ಕೂಡ ಇಲ್ಲ ಇವಾಗ ಅಲ್ಲಿ ಅಂಗನವಾಡಿಗೆ ಸೇರಬೇಕಾದ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇದ್ದು ಅಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಮಧ್ಯಪಾನ ಧೂಮ್ರ ಪಾನ ಮತ್ತು ಇಸ್ಪೀಟ್ ಅಡ್ಡವಾಗಿ ಪರಿವರ್ತನೆಯಾಗಿದೆ ಇತರ ಸರಕಾರಿ ಕಟ್ಟಡಗಳನ್ನು ನಿರ್ಮಿಸಿ ಬಾಲ್ಯದಲ್ಲಿ ಶಾಲೆಗೆ ಹೋಗಬೇಕಾದ ಬಡ ಮಕ್ಕಳು ಎಲ್ಲಿ ಹೋಗಬೇಕು ಏನು ಮಾಡಬೇಕು..
ಅಧಿಕಾರಿಗಳೇ ನಿಮ್ಮ ಮಕ್ಕಳಿಗೂ ಕೂಡ ಇದೇ ತರಹ ಮಾಡುತ್ತಿರಾ..
ವನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇನ್ನೊಂದು ಸರ್ಕಾರಿ ಪ್ರೌಢಶಾಲೆ ಇದ್ದು ಆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಕೂಡ ಇಲ್ಲ.
ಬಾಲಕರಿಗೂ ಮತ್ತು ವಿದ್ಯಾರ್ಥಿನಿಯರಿಗೂ ಇರುವುದು ಒಂದೇ ಶೌಚಾಲಯ ಮತ್ತೆ ಆ ಶಾಲೆಯ ಆವರಣದಲ್ಲಿ ಕಳೆದು ಮೂರು ನಾಲ್ಕು ವರ್ಷಗಳಿಂದ ಹೈಟೆಕ್ ಸೌಚಾಲಯ ಗುತ್ತಿಗೆದಾರನಿಗೆ ನೀಡಿತು ಇಲ್ಲಿಯವರೆಗೆ ಆ ಶೌಚಾಲಯ ಕಟ್ಟಡ ಪೂರ್ಣಗೊಂಡಿಲ್ಲ ಯಾಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.?
ಅಲ್ಲಿಯ ಶಿಕ್ಷಕರು ಮತ್ತು ಪ್ರಾಂಶುಪಾಲರುಗೆ ಕೇಳಿದಾಗ ವಿದ್ಯಾರ್ಥಿನಿಯರಿಗೆ ಶೌಚಾಲಯ ಎಲ್ಲಿದೆ ಎಂಬ ಪ್ರಶ್ನೆ ಮಾಡಿದಾಗ ಅವರು ಕೂಡ ಅದೇ ಶೌಚಾಲಯಕ್ಕೆ ಹೋಗುತ್ತಾರೆ ವಿದ್ಯಾರ್ಥಿಗಳಿಗೂ ಕೂಡ ಅದೇ ಶೌಚಾಲಯಕೆ ಹೋಗುತ್ತಾರೆ ಎಂದು ಪ್ರಾಂಶುಪಾಲರು ಹೇಳುತ್ತಾರೆ..
ಪ್ರಾಂಶುಪಾಲರು ನಿಮ್ಮ ಮಕ್ಕಳಿಗೂ ಕೂಡ ಇದೇ ತರ ಮಾಡುತ್ತೀರಾ..?
ವಿದ್ಯಾರ್ಥಿನಿಯರಿಗೆ ಮತ್ತು ಗಂಡು ಮಕ್ಕಳಿಗೆ ಒಂದೇ ಶೌಚಾಲಯ ಇದೆ ಅಂತ ಹೇಳುವ ಪ್ರಾಂಶುಪಾಲರಿಗೆ ನಾಚಿಕೆ ಆಗೋದಿಲ್ಲ ಆ ಭಾಗದ ಶಾಸಕರು ಏನು ಮಾಡುತ್ತಿದ್ದೀರಿ ಸ್ವಲ್ಪ ವನ್ನೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಮತ್ತು ರಸ್ತೆಗಳಿಗೆ ಶಾಸಕರೇ ಬಂದು ನೀವು ಗಮನ ಹರಿಸಬೇಕು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಅಲ್ಲಿಯ ಪಾಲಕರಿಗೆ ಮತ್ತು ಜನರಿಗೆ ತಿಳಿತಾ ಇಲ್ಲ..
ಆದಷ್ಟು ಬೇಗ ಜನತಾ ಕಾಲೋನಿಲ್ಲಿ ಇರುವ ಶಾಲೆ ಆವರಣ ಸ್ವಚ್ಛಗೊಳಿಸಬೇಕು ಮತ್ತು ಜನತಾ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ಪುನರ ಆರಂಭಿಸಬೇಕು ಪ್ರೌಢಶಾಲೆಯಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕೆಂದು ಬೈಲಹೊಂಗಲ್ ಶಾಸಕರಿಗೆ ಮತ್ತು ಮೇಲಾಧಿಕಾರಿಗಳಿಗೆ ನ್ಯೂಸ್ 360 ಕನ್ನಡ ವತಿಯಿಂದ ವಿನಂತಿಸಿಕೊಳ್ಳುತ್ತೇವೆ
ವರದಿ ವಿನೋದ್ ಎಂ ಜೆ ನ್ಯೂಸ್ 360 ಕನ್ನಡ ಸಂಪಾದಕರು..





