ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು 2010 ರಲ್ಲಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ದಕ್ಷ ಆಡಳಿತವನ್ನು ನೀಡಿದ ಶ್ರೀ ಸಂದೀಪ್ ಪಾಟೀಲ್. ರವರು
ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ಶ್ರೀ ಸಂದೀಪ್ ಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಕೋಪನ್ ಹೇಗನ್ ನಲ್ಲಿ ಇತ್ತೀಚೆಗೆ ನಡೆದ World Triathlon Competition ನಲ್ಲಿ ಭಾಗವಹಿಸಿದ್ದ ಶ್ರೀ ಸಂದೀಪ್ ಪಾಟೀಲ್ ಅವರು

” ಸಮುದ್ರದಲ್ಲಿ 3.8 km ಈಜು ಹೊಡೆದ ನಂತರ, ತಕ್ಷಣವೇ 180 ಕಿಲೋಮೀಟರ್ ದೂರ ಸೈಕಲ್ ತುಳಿದು, ನಂತರ ತಕ್ಷಣವೇ 42km ದೂರ ಓಡಿ…..ಇವೆಲ್ಲವನ್ನೂ ಕೇವಲ 14 ಗಂಟೆ 45 ನಿಮಿಷಗಳಲ್ಲಿ ಪೂರೈಸಿದ್ದಾರೆ ”
ಇದಕ್ಕಾಗಿ ಕಳೆದ ಜನವರಿ ತಿಂಗಳಿಂದ ಅವರು ಮಾಡಿರುವ ನಿರಂತರತೆ ಅವರು ಕಾಪಾಡಿಕೊಂಡಿರುವ ಶಾರೀರಿಕ ಶಿಸ್ತು… ಎಲ್ಲಾ ವಿವರಗಳು ನಿಜಕ್ಕೂ ಶ್ಲಾಘನೀಯ.
ಇವರ ಈ ಕಾರ್ಯ ಯುವ ಜನಾಂಗಕ್ಕೆ ಒಂದು ಪ್ರೇರಣೆ ನೀಡುವಂತಹದ್ದು.
ಮತ್ತೊಮ್ಮೆ ಪೋಲಿಸ್ ಇಲಾಖೆಗೆ, ರಾಜ್ಯಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿರುವ ಶ್ರೀ ಸಂದೀಪ್ ಪಾಟೀಲ್ ಅವರಿಗೆ ಅಭಿನಂದನೆಗಳು.

