ಬೆಳಗಾವಿ

ಬೆಳಗಾವಿಯಲ್ಲಿ 29ನೇ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್

17Views

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕದಿಂದ ಐದು ದಿನಗಳ ‘ಮಕ್ಕಳ ಮೇಳ’ಕ್ಕೆ ಸಿದ್ಧತೆ

ಬೆಳಗಾವಿ:11.11.2025

ರಾಜ್ಯದ ಯುವ ಪೀಳಿಗೆಯಲ್ಲಿ ಶಿಸ್ತು, ನಾಯಕತ್ವ ಮತ್ತು ಸಹಕಾರ ಮನೋಭಾವವನ್ನು ಬೆಳೆಸುವ ಮಹೋನ್ನತ ಉದ್ದೇಶದೊಂದಿಗೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕವು ಈ ಬಾರಿ ಬೆಳಗಾವಿಯಲ್ಲಿ 29ನೇ ರಾಜ್ಯ ಮಟ್ಟದ ಜಾಂಬೋರೇಟ್ ಅನ್ನು ಆಯೋಜಿಸಿದೆ. “ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ವೇದಿಕೆ” ಎಂದೇ ಖ್ಯಾತವಾಗಿರುವ ಈ ಬೃಹತ್ ಶಿಬಿರವು, ಯುವ ಸ್ಕೌಟ್ಸ್ ಮತ್ತು ಗೈಡ್‌ಗಳಿಗೆ ಜೀವನ ಶಿಕ್ಷಣವನ್ನು ನೀಡುವ ಒಂದು ಮೇಳವಾಗಿದೆ.

29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್

* ದಿನಾಂಕ: ಡಿಸೆಂಬರ್ 27, 2025 ರಿಂದ ಜನವರಿ 01, 2026 ರವರೆಗೆ (ಆರು ದಿನಗಳು)

* ಸ್ಥಳ: ಹೊನಗಾ ಗ್ರಾಮದ ಫೀನಿಕ್ಸ್ ಪಬ್ಲಿಕ್ ಶಾಲೆ, ಬೆಳಗಾವಿ ಜಿಲ್ಲೆ.

* ಪಾಲ್ಗೊಳ್ಳುವಿಕೆ: ರಾಜ್ಯಾದ್ಯಂತ ಸುಮಾರು 5,000ಕ್ಕೂ ಹೆಚ್ಚು ಸ್ಕೌಟ್ಸ್, ಗೈಡ್ಸ್, ರೋವರ್‌ಗಳು, ರೇಂಜರ್‌ಗಳು ಮತ್ತು ದಳನಾಯಕರು ಭಾಗವಹಿಸಲಿದ್ದಾರೆ.

 

*ಜಾಂಬೋರೇಟ್*

ಜೀವನ ಶಿಕ್ಷಣದ ಅಕ್ಷಯ ಪಾತ್ರೆ

ಜಾಂಬೋರೇಟ್ ಎಂದರೆ ಕೇವಲ ಶಿಬಿರವಲ್ಲ; ಇದು ನಾಯಕತ್ವ, ಭ್ರಾತೃತ್ವ, ಶಿಸ್ತು, ಸೌಹಾರ್ದತೆ, ದೇಶಭಕ್ತಿ ಮತ್ತು ಸಹಜೀವನ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸುವ ಒಂದು ಮಹಾ ವೇದಿಕೆ. ಈ ಬೃಹತ್ ‘ಮಕ್ಕಳ ಮೇಳ’ದಲ್ಲಿ ಬೆಳಗಿನ ವ್ಯಾಯಾಮದಿಂದ ಹಿಡಿದು ರಾತ್ರಿ ಮಲಗುವವರೆಗೂ ಕ್ರಮಬದ್ಧ ಮತ್ತು ಅಚ್ಚುಕಟ್ಟಾದ ಕೆಲಸಗಳ ಹಂಚಿಕೆ ಇರುತ್ತದೆ.

 

*ಶಿಬಿರದ ವಿಶೇಷತೆಗಳು:*

* ಸಾಹಸ ಚಟುವಟಿಕೆಗಳು: ವಿವಿಧ ಹೊರಾಂಗಣ ಸಾಹಸ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು.

* ಸಾಂಸ್ಕೃತಿಕ ಸೌಹಾರ್ದತೆ: ಪ್ರತಿದಿನ ಸಂಜೆ ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಿದ ಮಕ್ಕಳು ತಮ್ಮ ಸ್ಥಳೀಯ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಪ್ರಸ್ತುತಪಡಿಸಲಿದ್ದಾರೆ.

 

* ಸೇವೆ ಮತ್ತು ಸಂರಕ್ಷಣೆ:

ಯುವಕರಲ್ಲಿ ಸೇವಾಭಾವನೆ ಮತ್ತು ಸಹಕಾರ ಮನೋಭಾವ ಬೆಳೆಸಲು ಪರಿಸರ ಸಂರಕ್ಷಣೆ ಯೋಜನೆಗಳು ಸಹ ನಡೆಯಲಿವೆ.

ಆಯೋಜನೆ ಮತ್ತು ಸಹಯೋಗ

ಮಾಜಿ ಸಚಿವರು ಹಾಗೂ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

* ಸಹಯೋಗ: ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಜಿಲ್ಲಾ ಸಂಸ್ಥೆ ಬೆಳಗಾವಿ.

ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಿದ್ಯುತ್ ಮಂಡಳಿ, ಮಹಾನಗರ ಪಾಲಿಕೆ, ಹಾಗೂ ಶಿಕ್ಷಣ ಇಲಾಖೆಗಳು ಕಾರ್ಯಕ್ರಮದ ಯಶಸ್ಸಿಗಾಗಿ ಸಂಪೂರ್ಣ ಸಹಕಾರ ನೀಡುತ್ತಿವೆ.

*ಗಣ್ಯರ ಅಭಿಪ್ರಾಯ ಮತ್ತು ಮಾರ್ಗದರ್ಶನ*

ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯ ಅವರು ಮಾತನಾಡಿ, “ಈ ಜಾಂಬೋರೇಟ್ ಜಿಲ್ಲೆಯ ಸ್ಕೌಟಿಂಗ್ ಚಟುವಟಿಕೆಗೆ ಹೊಸ ಶಕ್ತಿಯನ್ನು ತುಂಬಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. 2001ರಲ್ಲಿ 24ನೇ ಜಾಂಬೋರೇಟ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದ ಬೆಳಗಾವಿಗೆ ಸುಮಾರು 25 ವರ್ಷಗಳ ಬಳಿಕ ಮತ್ತೆ ಈ ಅವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಸಹಕರಿಸುವಂತೆ ಅವರು ಕೋರಿದರು.

ಜಾಂಬೋರೇಟ್ ಅನ್ನು

ಸತೀಶ ಲ. ಜಾರಕಿಹೊಳಿ (ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು), ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು), ಮೊಹಮ್ಮದ ರೋಷನ್ ಡಿಸಿ, ಮತ್ತು ರಾಹುಲ್ ಸಿಂಧೆ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಬೆಳಗಾವಿ) ರವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ.

  1. ಪ್ರತಿಕಾ ಗೋಷ್ಟಿಯಲ್ಲಿ ರಾಹುಲ ಸಿಂಧೆ (ಸಿಇಒ, ಜಿ.ಪಂ ಬೆಳಗಾವಿ), ಗಜಾನನ ಮನ್ನಿಕೇರಿ (ಉಪಾಧ್ಯಕ್ಷರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಮುಖ್ಯ ಆಯುಕ್ತರು, ಬೆಳಗಾವಿ)ಪ್ರಭಾಕರ ಭಟ್ ಮತ್ತು ಜಿಲ್ಲಾ ಸಂಸ್ಥೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply