Uncategorized

ಕೊಳಚೆ ವಾಸನೆಯಲ್ಲಿ ಕುಳಿತಿರುವ ಅಂಗನವಾಡಿಯ ಕಂದಮಗಳು

37Views

 

ಗೋಕಾಕ್ ತಾಲೂಕಿನ ಖಣಗಾವ್ ಗ್ರಾಮ ಪಂಚಾಯಿತಿಯ ಹಿಂಭಾಗದಲ್ಲಿರುವ ಕ್ರಮ. ಸಂಖ್ಯೆ. 264. ಅಂಗನವಾಡಿಯ ಅಕ್ಕ ಪಕ್ಕ ಕೊಳಚೆ ವಾಸನೆ.

ಹೌದು ವೀಕ್ಷಕರೇ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಖನಗಾವ್ ಗ್ರಾಮ ಪಂಚಾಯಿತಿಯ ಹಿಂಭಾಗದಲ್ಲಿರುವ ಅಂಗನವಾಡಿಯಲ್ಲಿ ಉಚ್ಚಿ ವಾಸನೆ ಹಾಗೂ ಕೊಳಚೆ ದುರ್ವಾಸನೆ ತೆಗೆದುಕೊಂಡು ಅಂಗನವಾಡಿಯಲ್ಲಿ ಕುಳಿತಿರುವ ಕಂದಮಗಳು .

ಅಂಗನವಾಡಿಯ ಪಕ್ಕ ಸಾರ್ವಜನಿಕರೇ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಲ್ಲಿ ಅಲ್ಲೇ ಕುಳಿತು ಶಿಕ್ಷಣ ಪಡೆಯುವ ಸಣ್ಣ ಮಕ್ಕಳ ಪರಿಸ್ಥಿತಿಯ ಏನು

ಆ ಚಿಕ್ಕ ಮಕ್ಕಳಿಗೆ ಆರೋಗ್ಯದ ಮೇಲಾಗುವ ಏರುಪೇರುಗಳಿಗೆ ಜವಾಬ್ದಾರಿಯೇ ಯಾರು.

ಅಂಗನವಾಡಿ ಕಂದಮಗಳಿಗೆ ಕುಡಿಯಲು ಫಿಲ್ಟರಿನ ನೀರು ಕೂಡ ಸೌಲಭ್ಯವಿಲ್ಲ ಅಂಗನವಾಡಿ ಮುಂಭಾಗದಲ್ಲಿರುವ ಸಿಂಟೆಕ್ಸ್ ಇಟ್ಟಿರುವ ಕೊಳಚೆ ನೀರು ಮತ್ತು ಉಚ್ಚೆ ಅದರ ಕೆಳಗಡೆಯಿಂದ ಹಾದು ಹೋದರು ಕೂಡ ಆ ನೀರಿನಿಂದಲೇ ಕಂದಮ್ಮಗಳಿಗೆ ಅಡುಗೆ ಮಾಡುತ್ತಿರುವ ಅಂಗನವಾಡಿಯ ಕಾರ್ಯಕರ್ತರು ಕಂಡು ಕಾಣದಂತೆ ಕುಳಿತಿರುವ ಅಧಿಕಾರಿಗಳು ಈ ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೋ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ ಆದಷ್ಟು ಬೇಗ ಈ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ನಮ್ಮ ವಾಹಿನಿ ಮುಖಾಂತರ ಕೇಳಿಕೊಳ್ಳುತ್ತೇವೆ..

Leave a Reply